ಬದಿಯಡ್ಕ ವಿದ್ಯಾಪೀಠದಲ್ಲಿ ಅಧ್ಯಾಪಕರಿಗೆ 2 ದಿನದ `ವೇದ ಗಣಿತ’ ತರಬೇತಿ
ಕಾಸರಗೋಡು : ಧರ್ಮಚಕ್ರ ಸ್ಕೂಲ್ಸ್ ನ ವತಿಯಿಂದ ನಡೆಯುತ್ತಿರುವ ಶಾಲೆಗಳಾದ ಮಂಗಳೂರು, ಮೈಸೂರು, ಉರುವಾಲು, ಮುಜುಂಗಾವು, ಬದಿಯಡ್ಕ ಶಾಲೆಗಳ ಗಣೆತ ಅಧ್ಯಾಪಕ ಅಧ್ಯಾಪಿಕೆಯರಿಗೆ 2 ದಿವಸದ `ವೇದ ಗಣಿತ’ ತರಬೇತಿ ಕಾರ್ಯಕ್ರಮವನ್ನು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಅಯೋಜಿಸಲಾಯಿತು. ಕೇಂದ್ರ ಸರಕಾರದ ಸ್ಟೇಟಿಸ್ಟಿಕ್ಸ್ ವಿಭಾಗದ ಹಿರಿಯ ಅಧಿಕಾರಿ ಪ್ರಮೋದ್ ಪಂಡಿತ್ ಬೆಂಗಳೂರು ಅವರು ತರಗತಿಯನ್ನು ನಡೆಸಿಕೊಟ್ಟರು. ಗಣಿತದ ಸರಳ ವಿಧಾನಗಳನ್ನು ತಿಳಿಸಿದರು. ಶಾಲಾ ಅಧ್ಯಕ್ಷ ಜಯಪ್ರಕಾಶ ಪಜಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.